Wednesday, 4 November 2015

ಕೇಳೇ ನನ್ನವಳೆ


ನನಗದೆಲ್ಲಿಯ ಬಡತನ

ಜೊತೆಯಲ್ಲಿ ನೀನಿದ್ದಾಗ
ಅದೆಂತಹ ಸಿರಿತನ
ನೀನಿರದೆ ಹೋದಾಗ

ಅನು ದಿನವು ಪ್ರೇಮೋತ್ಸವ
ಜೊತೆಗಿದ್ದರೆ ನೀ ನಸುನಗುತ
ಕಣ ಕಣದಲೂ ವಿರಹೋತ್ಸವ
ನೀ ಹೋದರೆ ಕ್ಷಣ ದೂರ 

ಹೂ ತುಟಿಯ ಮೇಲೊಂದು
ಮುತ್ತನಿಟ್ಟು ಚುಂಬಿಸಲು
ನಿನ್ನ ಕಮಲ್ಗಣ್ಣಲಿ ಮಿಂಚಿ
ಮರೆಯಾಗುವ ನಗುವಾಗಲೇ ನಾ ? 

ಬಿಗಿದುಕೊಳ್ಳಲು ಕೈಗೆ ಕೈ
ಉಸಿರಿನೊಳಗುಸಿರು ಸೇರಿ
ಬೆರೆತು ನಾವಿಬ್ಬರು ಬಾಡಿದ
ಹೂವಂತೆ ಕೂರೋಣವೇ ಗೆಳತಿ..? 

ಚರ-ಚರಣಾದಿ ಕವ್ಯಾರ್ಥದಲ್ಲಿ 
ತುಂಬಿ ತುಳುಕುವಳೆನ್ನ ಪ್ರೇಮ ಗಂಗೆ.           
ಸತೀಶ  ನಡಗಡ್ಡಿ

ಭೋರ್ಗರೆವೆ ನೀ

ಭೋರ್ಗರೆವೆ ನೀ

ಹಿಂದೆಂದಿಗಿಂತಲೂ ನೀ
ಇಂದೆನ್ನ ಮನಹೊಕ್ಕು
ಮತ್ತದೇ ಹಳೆಯ
ಹತ್ತು ಹಲವಾರು
ಭಾವಗಳಲಿ ಕುಣಿದಡುತಿರುವೆ

ಒಂದೊಂದು ಪದಕೂ ನೀ
ಹೊಸದೊಂದು ರಸಿಕತೆಯ
ರಸಾನಿಭವ ತೋರಿಸಿ
ಅನುದಿನವು ಭೋರ್ಗರೆದು
ನನ್ನಲಿ ಜನಜನಿತವಾಗಿರುವೆ

ಅನಿಸುವುದೊಮ್ಮೊಮ್ಮೆಇದೆಲ್ಲದಕೂ
ನೀನೆ ಆದಿ ಮತ್ತು ಭಾವಿಗೆ ನಂದಿ
ಅದೆಷ್ಟು  ಬಾರಿ ಸಾರಿ ನಾ
ಹೇಳಲಿ ತಿಳಿದೂ ತಿಳಿದೂ
ತಿಳಿಯಲಾರದಂತೆ ನೀನೇಕಿರುವೆ ?

ಅಂದಿನಿಂದಿಂದಿನವರೆಗೂ ನೀ
ಮುಂಬರುವ ದಿನಗಳೂ ,
ಅಸುನೀಗುವಾ ಕ್ಷಣದವರೆಗೂ
ನನ್ನ ಸಂಗಾತಿಯಾಗಿ ನೀ
ಜೊತೆಯಾಗುವೆಯಾ ನನ್ನವಳೇ..?
                 - ಸತೀಶ ನಡಗಡ್ಡಿ

RIP: DR APJ Abdul Kalam Ji


Tuesday, 3 November 2015

ನಾನು ಬಂಧಿ.


ಬಂಧಿಯಾಗಿರುವೆ ನಾನು
ನಿನ್ನ ಪ್ರೀತಿಗೆ
ಕೊಚ್ಚಿ ಹೋಗುವೆನೇನೊ ನಾ
ನಿನ್ನೊಲವಿನ ಸುಳಿಗೆ
ತಿಳಿಯದಾಗಿದೆ ಯಾಕೆಂದು
ಏನೊಂದೂ ನನಗೆ
ವಿಧಿ ಒದಗಿಸಿದ ಸುಧೆಯೋ
ಇದು ನಮ್ಮಿಬ್ಬರಿಗೆ.

                - ಸತೀಶ ಉ ನಡಗಡ್ಡಿ

Monday, 2 November 2015