ಭೋರ್ಗರೆವೆ ನೀ
ಹಿಂದೆಂದಿಗಿಂತಲೂ ನೀ
ಇಂದೆನ್ನ ಮನಹೊಕ್ಕು
ಮತ್ತದೇ ಹಳೆಯ
ಹತ್ತು ಹಲವಾರು
ಭಾವಗಳಲಿ ಕುಣಿದಡುತಿರುವೆ
ಒಂದೊಂದು ಪದಕೂ ನೀ
ಹೊಸದೊಂದು ರಸಿಕತೆಯ
ರಸಾನಿಭವ ತೋರಿಸಿ
ಅನುದಿನವು ಭೋರ್ಗರೆದು
ನನ್ನಲಿ ಜನಜನಿತವಾಗಿರುವೆ
ಅನಿಸುವುದೊಮ್ಮೊಮ್ಮೆಇದೆಲ್ಲದಕೂ
ನೀನೆ ಆದಿ ಮತ್ತು ಭಾವಿಗೆ
ನಂದಿ
ಅದೆಷ್ಟು ಬಾರಿ ಸಾರಿ ನಾ
ಹೇಳಲಿ ತಿಳಿದೂ ತಿಳಿದೂ
ತಿಳಿಯಲಾರದಂತೆ ನೀನೇಕಿರುವೆ
?
ಅಂದಿನಿಂದಿಂದಿನವರೆಗೂ ನೀ
ಮುಂಬರುವ ದಿನಗಳೂ ,
ಅಸುನೀಗುವಾ ಕ್ಷಣದವರೆಗೂ
ನನ್ನ ಸಂಗಾತಿಯಾಗಿ ನೀ
ಜೊತೆಯಾಗುವೆಯಾ ನನ್ನವಳೇ..?
- ಸತೀಶ ಉ ನಡಗಡ್ಡಿ
No comments:
Post a Comment